Ads Google

Tuesday, December 8, 2015

ಬಲಿಪಾಡ್ಯಮಿ

ವಾಮನನನ ನಿಜವನರಿತು ಸ್ವಾಮಿಯವಗೆ ಭಿಕ್ಷೆಯೀವ                               
ಹಿರಿಮೆಯದುವೆ ಬಾಳಲೊಂದು ದಿವ್ಯಸಂಧಿ ಭವ್ಯಕ್ಷಣವು
ನರರಿಗೆಂದು ದೊರೆಯದಂತ ಭಾಗ್ಯವೊಂದು ದೊರೆಗೆ ಸಿಗಲು
ಕಿರಿಯನೆದುರು ಹಿರಿಯ ಬಾಗಿ ಕುಳಿತನವನು  ರಾಜಯೋಗಿ
ಮೂರುಪಾದಕೆಡೆಯ ಬೇಡೆ ಬಲಿಯು ಒಡನೆ ನೀಡಲೊಪ್ಪಿ
ಭುವಿಯ ಮೇಲೆ ಒಂದು ಹೆಜ್ಜೆ ನಭದಲೊಂದು ಪಾದವಿಡಲು
ಉಳಿದ ಪದಕೆ ತಲೆಯನಿತ್ತು ಮುಕ್ತಿ ಪಡೆದ ಚಕ್ರವರ್ತಿ ಪುಣ್ಯವಂತನು

No comments:

Post a Comment